ಟೈಫಸ್ ಜ್ವರ
 
ರಿಕೆಟ್ಸಿಯ ಎಂಬ ವಿಶಿಷ್ಟ ರೋಗಾಣುಗಳ ಸೋಂಕಿನಿಂದ ಉಂಟಾಗುವ ಜ್ವರ. ಇದರಲ್ಲಿ ಮನಸ್ಸಿನ ಅಸ್ತವ್ಯಸ್ತತೆ ಮತ್ತು ಮಂದತನ ಪ್ರಧಾನವಾಗಿ ಬುದ್ದಿಗೆ ಮಂಜು ಮುಸುಕಿನಂತೆ ಇರುವುದರಿಂದ ಇದಕ್ಕೆ ಟೈ¥sóÀಸ್ ಎಂಬ ಹೆಸರು ಬಂದಿದೆ. ಈ ಹೆಸರಿಟ್ಟವನು ಹಿಪಾಕ್ರಟೀಸ್.  ಟೈಫಸ್ ಎಂದರೆ ಮಂಜು ಅಥವಾ ಹೊಗೆ ಎಂದರ್ಥ. 18ನೆಯ ಶತಮಾನದಲ್ಲಿ ಡಿಸಾವೇಜಸ್ ಎಂಬಾತ ಆಗ ಸಾಮಾನ್ಯವಾಗಿ ಉಂಟಾಗುತ್ತಿದ್ದ ಹಡಗಿನ ಸಾಂಕ್ರಾಮಿಕ ಪಿಡುಗಿಗೆ ಟೈಫóಸ್ ಎಂದು ಹೆಸರಿಟ್ಟನಾದರೂ ಟೈಫಸ್ ಎಂಬ ಶಬ್ದವನ್ನು ಸಾಮಾನ್ಯ ಬಳಕೆಗೆ ತಂದವನು ಕಲ್ಲೆನ್. ಈ ಸಾಂಕ್ರಾಮಿಕ ಜ್ವರಕ್ಕೂ ವಿಷಮಶೀತಜ್ವರಕ್ಕೂ (ಟೈಫಾóಯಿಡ್) ಇರುವ ವ್ಯತ್ಯಾಸವನ್ನು ಗೆರ್‍ಹಾರ್ಡ್ 1836ರಲ್ಲಿ ಸ್ಪಷ್ಟಪಡಿಸಿದ. ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ರಿಕೆಟ್ಸ್ ಪ್ರೊವಾಸೆಕ್ ಮುಂತಾದವರಿಂದ ರೋಗ ಹಾಗೂ ರೋಗಕಾರಕಗಳ ವ್ಯಾಸಂಗ ಮುಂದುವರೆಯಿತು. ಇವರ ಗೌರವಾರ್ಥವಾಗಿ ಟೈಫಸ್‍ಕಾರಕ ವಿಷಾಣುವಿನ ಒಂದು ಪ್ರಭೇದಕ್ಕೆ ರಿಕೆಟ್ಸಿಯ ಪ್ರೊವಾಸಿಕಿ ಎಂದೇ ಹೆಸರಿಟ್ಟಿದ್ದಾರೆ. 1909ರಲ್ಲಿ ರಿಕೆಟ್ಸ್, ನಿಕೋಲಿ ಇವರ ವ್ಯಾಸಂಗಗಳಿಂದ ಟೈ¥sóÀಸ್ ರೋಗವನ್ನು ಕೃತಕವಾಗಿ ಪ್ರಯೋಗಾಲಯ ಪ್ರಾಣಿಗಳಾದ ಗಿನಿ ಹಂದಿ, ಕೋತಿ ಇವುಗಳಲ್ಲಿ ಉಂಟುಮಾಡಬಹುದೆಂದೂ ರೋಗ ಪ್ರಸಾರದಲ್ಲಿ ಹೇನು ಪಾತ್ರವಹಿಸುದೆಂದೂ ವ್ಯಕ್ತಪಟ್ಟಿತು. ಪ್ರೊವಾಸೆಕ್ (1914) ಮತ್ತು ಡರೋಷ ಲಿಮಾ (1916) ಇವರು ರೋಗಿಯ ಮೇಲಿನ ಹೇನಿನಲ್ಲಿ ಈ ವಿಶಿಷ್ಟ ರೋಗಾಣುಗಳಿರುವುದನ್ನು ತೋರಿಸಿದರು ಈಗ ಈ ವಿಶಿಷ್ಟ ರೋಗಾಣುಗಳಿಗೆ ರಿಕೆಟ್ಸಿಯಗಳೆಂದು ಕರೆದು ಸಂಧಿಪಾದಿಗಳಿಂದ (ಆರ್ಥೋಪಾಡ್ಸ್) ಹರಡುವ ಇವುಗಳ ಸೋಂಕುಜ್ವರಗಳಿಗೆಲ್ಲಕ್ಕೂ ಟೈಫ್óಸ್ ಎಂದೇ ಕರೆಯುವುದು ರೂಢಿಗೆ ಬಂದಿದೆ. ಈ ಶತಮಾನದ ಆದಿಭಾಗದಲ್ಲಿ ಮಾನವರಲ್ಲಿ ಬಹುವಾಗಿ ಸಾವುನೋವುಗಳನ್ನು ಉಂಟುಮಾಡಿದ ರೋಗಗಳ ಪೈಕಿ ಟೈಫóಸ್ ರೋಗ ಪ್ರಥಮ. ರಷ್ಯ ಒಂದರಲ್ಲೆ 1915ರಿಂದ 1922ರ ವರೆಗೆ ಮೂರು ಕೋಟಿ ಜನಕ್ಕೂ ಮಿಕ್ಕಿ ರೋಗ ತಗುಲಿ 30 ಲಕ್ಷಜನ ಮಡಿದರೆಂದು ಅಂದಾಜಾಗಿದೆ. 1932ರಲ್ಲಿ ಉಗಾಂಡ ಮತ್ತು ಆಫ್ಘಾನಿಸ್ತಾನಗಳಲ್ಲಿ, 1933-34ರಲ್ಲಿ ಈಜಿಪ್ಟ್, ರುಮೇನಿಯ, ಪೋಲಂಡ್ ಯುಗೋಸ್ಲಾವಿಯ, ಪೋರ್ಚುಗಲ್, ಹವಾಯ್ ದೇಶಗಳಲ್ಲಿ ಟೈಫ್óಸ್ ಬಹಳ ಹಾವಳಿ ಮಾಡಿತು. ಭಾರತದಲ್ಲೂ (ಹಿಮಾಚಲಪ್ರದೇಶ) 1938ರಿಂದ 1945ರ ಅವಧಿಯಲ್ಲಿ ಟೈಫ್óಸ್ ಅನೇಕ ಕಡೆಗಳಿಂದ ವರದಿಯಾಗಿತ್ತು ಟೈ¥sóÀಸ್ ರೋಗದಿಂದ ಗುಣಹೊಂದುತ್ತಿರುವ ವ್ಯಕ್ತಿಗಳ ರಕ್ತದ್ರವ (ಸೀರಮ್) ಟೈ¥sóÀಸ್ ರೋಗದಿಂದ ನರಳುತ್ತಿರುವ ಮಾನವರ ಮೂತ್ರದಲ್ಲಿರುವ ಪ್ರೋಟಿಯಸ್ ಎಂಬ ಏಕಾಣುಗಳ ಅಂಟಣಿಯನ್ನು (ಅಗ್ಲೂಟಿನೇಷನ್) ಉಂಟುಮಾಡುತ್ತದೆ. ಎಂದು 1915ರಲ್ಲಿ ವೆಯ್ಲ್ ಮತ್ತು ಫೆಲಿಕ್ಸ್ ಎಂಬುವರು ತೋರಿಸಿ ಟೈಫóಸ್ ವಿಷಾಣುಗಳ ಪತ್ತೆಗೆ ಉಪಾಯ ಕಲ್ಪಿಸಿದರು. ಬ್ಯಾಸಿಲ್ಲಸ್ ಪ್ರೋಟಿಯಸುಗಳಲ್ಲಿ ಅನೇಕ ಪ್ರಭೇಧಗಳಿರುವುದನ್ನು ಇವರು ಗ್ರಹಿಸಿ ಅವುಗಳಿಗೆ ಔಘಿ1, ಔಘಿ2  ಇತ್ಯಾದಿಯಾಗಿ ಹೆಸರಿಸಿದ್ದೇ ಅಲ್ಲದೆ ಔಘಿ2  ಮತ್ತು ಔಘಿ19  ಪ್ರಭೇದಗಳೇ ವಿಶೇಷವಾಗಿ ಟೈಫóಸ್ ರೋಗಿಯ ರಕ್ತದ್ರವದಿಂದ ಅಂಟಣಿಯಾಗುತ್ತವೆ ಎಂದು ತೋರಿಸಿದರು. ಪ್ರಯೋಗಾಲಯದಲ್ಲಿ ಕೃಷಿಮಾಡಿ 1923 ರ ವೇಳೆಗೆ ಪ್ರೋಟಿಯಸ್ ಔಘಿಏ ಎಂಬ ಪ್ರಭೇದವನ್ನು ಬೇರ್ಪಡಿಸಲಾಯಿತು. ಇಂದಿನ ದಿವಸಗಳಲ್ಲಿ ಟೈ¥sóÀಸ್ ರೋಗಾಣುಗಳನ್ನು ಪತ್ತೆಮಾಡಲು ಔಘಿ2 , ಔಘಿ19   ಮತ್ತು   ಘಿಏ  ಪ್ರೋಟಿಯಸ್ ಪ್ರಭೇದಗಳನ್ನು ಉಪಯೋಗಿಸುತ್ತಾರೆ. ಭಾರತದಲ್ಲಿ ಟೈ¥sóÀಸ್ ಇರುವುದನ್ನೂ ಅದರ ಪ್ರಸಾರ ಚಿಗಟಗಳಿಂದಾಗುವುದನ್ನು ತೋರಿಸಿದವ ಮೆಗಾ (1917). ಇಲ್ಲಿ ಟೈ¥sóÀಸ್ಸನ್ನು ಉಂಟುಮಾಡುವ ವಿಷಾಣುವಿನ ಪ್ರಭೇದಕ್ಕೆ ರಿಕೆಟ್ಸಿಯ ಓರಿಯಂಟಾಲಿಸ್ ಎಂದು ಹೆಸರು. ಸಾಮಾನ್ಯವಾಗಿ ಪ್ರಾಣಿಯಿಂದ ಪ್ರಾಣಿಗೆ ಸೋಂಕು ಟ್ರಾಂಬಿಕ್ಯುಲ ಡೆಲಿಯನ್ಸಿಸ್ ಎಂಬ ಸಂಧಿಪಾದಿಯಿಂದ ಹರುಡುತ್ತದೆ.

	ರಿಕೆಟ್ಸಿಯಗಳು ಗಾತ್ರದಲ್ಲೂ ಅಂತಸ್ತಿನಲ್ಲೂ ಬ್ಯಾಕ್ಟೀರಿಯಗಳ ಮತ್ತು ವೈರಸ್ಸುಗಳ ನಡುವೆ ಇರುವಂಥವು. ಬ್ಯಾಕ್ಟೀರಿಯಗಳನ್ನು ತಡೆಹಿಡಿಯುವ ಶೋಧಕಗಳಲ್ಲಿ (ಫಿಲ್ಟರ್ಸ್) ಇವು ತೂರಿಹೋಗಬಲ್ಲವು. ರಿಕೆಟ್ಸಿಯಗಳು ಗ್ರಾಮ್‍ಋಣ ವರ್ಣಗ್ರಾಹಿ ರೋಗಾಣುಗಳು. ಆಕಾರ ವೈವಿಧ್ಯ ಇವುಗಳ ಒಂದು ವೈಶಿಷ್ಟ್ಯ. ವೈರಸ್ಸುಗಳಂತೆ ಇವುಗಳ ಬೆಳೆವಣಿಗೆಗೂ ಜೀವಂತಕೋಶಗಳು ಅಗತ್ಯವಾಗಿದ್ದು ಇವು ಜೀವಕೋಶಗಳೊಳಗೆ ಮಾತ್ರ ಜೀವಿಸಿರಬಲ್ಲವು. ಶುಷ್ಕತೆಯನ್ನು ತಡೆಯಲಾರದೆ ನಾಶವಾಗಿ ಹೋಗುವುವು. ಅನೇಕ ರೋಗಾಣು ನಿರೋಧಕ ರಾಸಾಯನಿಕಗಳೂ ರಿಕೆಟ್ಸಿಯಗಳನ್ನು ನಾಶಮಾಡಬಲ್ಲವು. ರಿಕೆಟ್ಸಿಯಗಳು ನೈಸರ್ಗಿಕವಾಗಿ ನಾಯಿ, ಇಲಿ, ಹೆಗ್ಗಣ, ಅಳಿಲು ಮುಂತಾದ ಪ್ರಾಣಿಗಳಲ್ಲಿ ರೋಗಕಾರಕಗಳಾಗಿದ್ದು ಆಕಸ್ಮಿಕವಾಗಿ ಮಾನವರಿಗೂ ವರ್ಗಾವಣೆ ಹೊಂದಿ ಅವರಲ್ಲಿ ರೋಗವನ್ನು ಉಂಟುಮಾಡುತ್ತವೆ. ಹೇನಿನಿಂದ ಪ್ರಸಾರವಾಗುವ ರಿಕೆಟ್ಸಿಯ ಮಾತ್ರ ಮಾನವರಿಂದಲೇ ಮಾನವರಿಗೆ ವರ್ಗಾವಣೆ ಆಗುತ್ತದೆ. ನುಸಿ (ಮೈಟ್) ಮತ್ತು ಉಣ್ಣಿಗಳು (ಟಿಕ್ಸ್) ಹರಡುವ ರಿಕೆಟ್ಸಿಯ ಪ್ರಭೇದಗಳು ಬೇರೆಯೇ. ಈ ರೋಗಾಣುಗಳು ನುಸಿ ಉಣ್ಣಿಗಳಲ್ಲಿ ಸಂತತಿಯಿಂದ ಸಂತತಿಗೆ ಸಾಗಿ ಸೋಂಕನ್ನು ಬಹುಕಾಲಿಕವಾಗಿ ಹರಡುತ್ತಲೇ ಇರುವುದು ಒಂದು ವಿಶೇಷ. ಟೈ¥sóÀಸ್ ರೋಗಾಣುವಿನ ಇನ್ನೊಂದು ಪ್ರಭೇದ ಚಿಗಟಗಳಿಂದ ಪ್ರಸಾರವಾಗುತ್ತದೆ. ಮಾನವರಲ್ಲಿ ಈ ಎಲ್ಲ ವಿವಿಧ ಪ್ರಭೇದಗಳಿಂದಲೂ ಉಂಟಾಗುವ ಟೈ¥sóÀಸ್ ಜ್ವರ ಏಕಾಏಕಿ ತೀವ್ರವಾಗಿಯೇ ಪ್ರಾರಂಭವಾಗುತ್ತದೆ. ಹಗಲು ರಾತ್ರಿಗಳಲ್ಲಿ ಏರಿಳಿತವಿದ್ದರೂ ಜ್ವರ, ನಿರಂತರ ತಲೆನೋವು, ವಿಷಮತೆ (ಟ್ಯಾಕ್ಸೀಮಿಯ). ಜ್ವರ ಶುರುವಾದ ನಾಲ್ಕೈದು ದಿವಸಗಳಲ್ಲಿ ಚರ್ಮದ ಮೇಲೆ ಏಳುವ ನುಚ್ಚುಗಂಧೆ (ರ್ಯಾಷ್)-ಇವು ಇತರ ಸಾಮಾನ್ಯ ಲಕ್ಷಣಗಳು. ಯಾವ ಪ್ರಭೇದದ ರೋಗಾಣುವಿನಿಂದ ಜ್ವರ ಬಂದಿದೆ ಎನ್ನುವುದನ್ನು ಪ್ರಯೋಗಾಲಯ ಪ್ರಾಣಿಗಳಿಗೆ ರೋಗಿಯ ರಕ್ತವನ್ನು ಚುಚ್ಚುಮದ್ದಿನ ರೀತಿ ಪ್ರಯೋಗಿಸಿ ತಿಳಿದುಕೊಳ್ಳಬಹುದು. ಸಾಂಕ್ರಾಮಿಕ ಟೈ¥sóÀಸ್ಸಿನಿಂದ (ಹೇನಿನಿಂದ ಪ್ರಸಾರವಾಗುದು) ನರಳುತ್ತಿರುವ ರೋಗಿಯ ರಕ್ತವನ್ನು ಗಿನಿಹಂದಿಯ ಉದರದೊಳಗೆ ಚುಚ್ಚುಮದ್ದಿನ ರೀತಿ ಪ್ರಯೋಗಿಸಿದರೆ 10 ದಿವಸಗಳ ಅನಂತರ ಅದಕ್ಕೆ ಜ್ವರ ಬರುತ್ತದೆ. ರೋಗ ಚಿಗಟದ ಟೈ¥sóÀಸ್ಸಾಗಿದ್ದರೆ ಜ್ವರದ ಜೊತೆಗೆ ಗಿನಿ ಇಲಿಯ ವೃಷಣದ ಮುಂಭಾಗವನ್ನು ಹೊದಿಕೆಯಂತೆ ಮುಚ್ಚಿಕೊಂಡಿರುವ ಟ್ಯೂನಿಕವೆಜೈನಾಲಿಸ್ ಎಂಬ ಪೊರೆಯ ಊತ ಕಂಡುಬರುತ್ತದೆ. ಇದಕ್ಕೆ ನೀಲಿ-ಮೂರಸ್ ಪರಿಣಾಮ ಎಂದು ಹೆಸರು. ರೋಗ ನುಸಿಯ ಟೈ¥sóÀಸ್ಸಾಗಿದ್ದರೆ ವೃಷಣ ಮತ್ತು ವೃಷಣಕೋಶದ ಊತವೂ ಉಂಟಾಗುತ್ತದೆ. ಇದಲ್ಲದೆ ಮೇಲೆ ಹೇಳಿರುವಂತೆ ವೀಲ್-ಫೆಲಿಕ್ಸ್ ಇವರ ವಿಧಾನದಂತೆ ವಿಷಾಣು ಪ್ರಭೇದವನ್ನು ಗುರುತಿಸಬಹುದು. ಹೇನಿನ ಹಾಗೂ ಚಿಗಟದ ಟೈ¥sóÀಸ್ ಔಘಿ19 ಪ್ರೋಟಿಯಸ್ ಪ್ರಭೇದದ ಅಂಟಣಿಯನ್ನು ಬಹುವಾಗಿಯೂ ಔಘಿ2 ರ ಅಂಟಣಿಯನ್ನು ಸುಮಾರಾಗಿಯೂ ಉಂಟುಮಾಡುತ್ತದೆ. ಔಘಿಏ  ಪ್ರಭೇದದಲ್ಲಿ ಅಂಟಣಿ ಆಗುವುದೇ ಇಲ್ಲ. ಉಣ್ಣಿ ಟೈ¥sóÀಸ್ಸಿನಲ್ಲಿ ಔಘಿ19 ಮತ್ತು ಔಘಿ2  ಪ್ರೋಟಿಯಸ್ ಪ್ರಭೇದಗಳೆರಡಲ್ಲೂ ಒಂದೇ ರೀತಿ ಅಂಟಣಿ ಆದರೂ ಔಘಿಏ ಯಲ್ಲಿ ಅಂಟಣಿ ಆಗುವುದಿಲ್ಲ. ನುಸಿ ಟೈ¥sóÀಸ್ಸಿನಲ್ಲಿ ಔಘಿಏ  ಪ್ರೋಟಿಯಸ್ ಪ್ರಭೇದದಲ್ಲಿ ಮಾತ್ರ ಅಂಟಣಿ ಉಂಟಾಗುತ್ತದೆ. ಮಿಕ್ಕೆರಡರಲ್ಲಿ ಇಲ್ಲ. ಈ ಕೆಳಗೆ ವಿವಿಧ ಟೈ¥sóÀಸ್ ಜ್ವರಗಳ ಲಘುವಿವರಣೆಗಳನ್ನು ಕೊಟ್ಟಿದೆ.

	ಹೇನು ಹರಡುವ ಟೈ¥sóÀಸ್ (ಲೌಸ್ ಬೋರ್ನ್ ಟೈ¥sóÀಸ್) : ಇದು ಮಾನವರಿಂದಲೇ ಮಾನವರಿಗೆ ಅಂಟುವ ಸಾಂಕ್ರಮಿಕ ಜ್ವರ, ಕ್ಷಾಮದ ಜ್ವರ, ಯುದ್ಧದ ಜ್ವರ, ಸೆರಮನೆಯ ಜ್ವರ-ಇವು ಇದರ ಪರ್ಯಾಯನಾಮಗಳು. ವಿಷಾಣು ಪ್ರಭೇದದ ಹೆಸರು ರಿಕೆಟ್ಸಿಯ ಪ್ರೊವಾಸಿಕಿ. ತಲೆಹೇನು ಮತ್ತು ದೇಹದ ಕೊರೆಗಳು ರೋಗಿಯನ್ನು ಕಡಿದು ರಕ್ತಹೀರಿ ವಿಷಾಣುಯುಕ್ತವಾಗುತ್ತವೆ. ವಿಷಾಣುಗಳು ಹೇನಿನ ಕರುಳುಭಿತ್ತಿಯಲ್ಲಿ ವೃದ್ಧಿಸಿ ನಾಲ್ಕೈದು ದಿವಸಗಳ ಬಳಿಕ ಹೇನಿನ ಮಲದಲ್ಲಿ ವಿಸರ್ಜಿಸಲ್ಪಡುತ್ತವೆ. ಇಂಥ ಹೇನುಗಳು ಆರೋಗ್ಯವಾಗಿರುವ ಮಾನವರನ್ನು ಸೇರಿದರೆ ಅವರು ಹೇನುಕಡಿತಕ್ಕಾಗಿ ಕೆರೆದುಕೊಂಡ ವೇಳೆ ಇಲ್ಲವೇ ಹೇನನ್ನು ಕುಕ್ಕಿ ಸಾಯಿಸಿದಾಗ ಅದರ ಮಲದಲ್ಲಿರುವ ವಿಷಾಣುಗಳು ಮಾನವ ದೇಹವನ್ನು ಸೇರುತ್ತವೆ. ಹೇನಿನ ಮಲ ಒಣಗಿ ದೂಳಾಗಿ ಉಸಿರಾಟದಿಂದಲೂ ನಿರೋಗಿ ಮಾನವರ ದೇಹವನ್ನು ಸೇರಬಹುದು. ವಿಷಾಣುಯುಕ್ತವಾದ ಹೇನು 10-15 ದಿವಸಗಳ ಅವಧಿಯಲ್ಲಿ ಸತ್ತುಹೋಗುವ ತನಕ ಈ ರೀತಿ ಸೋಂಕು ಮಾನವರಿಂದ ಮಾನವರಿಗೆ ಪ್ರಸಾರವಾಗುತ್ತಿರುತ್ತದೆ. ಸಾಂಕ್ರಾಮಿಕ ಟೈ¥sóÀಸ್ ಪ್ರಪಂಚದ ಎಲ್ಲೆಡೆಯೂ ಕಂಡುಬರುತ್ತದೆ. ರಷ್ಯ, ಪೋಲಂಡ್, ಉತ್ತರ ಆಫ್ರಿಕ, ವೀನ, ಕೋರಿಯ ಮತ್ತು ದಕ್ಷಿಣ ಅಮೆರಿಕಾಗಳಲ್ಲಿ ಹೆಚ್ಚು. ಜನದಟ್ಟಣೆ, ಬಡತನ, ದೈಹಿಕ ಅಶುಚಿತ್ವಗಳು ಹೇನುಗಳ ವೃದ್ಧಿಗೆ ಅನುಕೂಲ. ಯುದ್ಧಕಾಲ, ಕ್ಷಾಮಕಾಲಗಳಲ್ಲಿ ಬಡತನ, ದೈಹಿಕ ನೈರ್ಮಲ್ಯದ ಅಭಾವ ಹೆಚ್ಚು. ಸೆರೆಮನೆ ಶಿಬಿರಗಳಲ್ಲಿ ಜನದಟ್ಟಣೆ ದೈಹಿಕ ಅಶುಚಿತ್ವಗಳ ಇದ್ದೇ ಇರುವುದು ವ್ಯಕ್ತ. ಇಂಥ ಸಂದರ್ಭಗಳಲ್ಲೆಲ್ಲ ಸಾಂಕ್ರಾಮಿಕ ಟೈ¥sóÀಸ್ಸಿನ ಹಾವಳಿ ಹೇಳತೀರದು. ಚಳಿಗಾಲದಲ್ಲಿ ಬೆಚ್ಚಗಿರುವುದಕ್ಕಾಗಿ ಮೈಮೇಲೆ ಹಾಕಿದ ಬಟ್ಟೆಯನ್ನು ಬಿಚ್ಚದೆ ಕೊರೆ ಹತ್ತುವ ಪ್ರಮೇಯ ಇರುವುದರಿಂದ ಆ ಕಾಲದಲ್ಲಿ ಟೈ¥sóÀಸ್ ರೋಗ ಹೆಚ್ಚು. ಮಾನವ ದೇಹದೊಳಹೊಕ್ಕ ವಿಷಾಣುಗಳು ವೃಷಣ, ಮೂತ್ರಜನಕಾಂಗ, ಸ್ನಾಯುಗಳು, ಗುಂಡಿಗೆ, ಚರ್ಮ, ನರಮಂಡಲ-ಇವೆಲ್ಲ ಕಡೆಗಳ ರಕ್ತನಾಳಗಳ ಭಿತ್ತಿಯ ಒಳಪದರದ ಕೋಶಗಳಲ್ಲಿ ನೆಲೆಸಿ ವೃದ್ಧಿಸುತ್ತವೆ. ಆ ಕೋಶಗಳ ಗಾತ್ರ ಹೆಚ್ಚಾಗುವುದಲ್ಲದೆ ಅಲ್ಲಿ ಮಾನೋನ್ಯೂಕ್ಲಿಯರುಗಳೆಂಬ ರಕ್ತಕಣಗಳ ಸಂಗ್ರಹ ಹಾಗೂ ವೃದ್ಧಿ ಆಗಿ ರಕ್ತನಾಳದ ಸುತ್ತ ಗಂಟಾದಂತಾಗುತ್ತದೆ. ಇದಕ್ಕೆ ಟೈ¥sóÀಸ್ ಕಿಗ್ಗಂಟು ಅಥವಾ ಫ್ರೇಯ್ನ್ಕಲ್ಲರನ ಕಿಗ್ಗಂಟು (ನಾಡ್ಯೂಲ್) ಎಂದು ಹೆಸರು. ರಕ್ತನಾಳದಲ್ಲಿ ರಕ್ತಸ್ರಾವವಾಗುವುದೂ ಸಾಮಾನ್ಯ. ಪ್ರಾರಂಭದಲ್ಲಿ ಸಣ್ಣ ರಕ್ತ ನಾಳಗಳಲ್ಲೂ ಇಂಥ ಲಕ್ಷಣಗಳು ಉಂಟಾಗಬಹುದು. ಗುಲ್ಮದ ಗಾತ್ರವೃದ್ಧಿ, ಬ್ರಾಂಕೋ ನ್ಯೂಮೋನಿಯ ಇವು ಸಾಮಾನ್ಯವಾಗಿ ರೋಗದಲ್ಲಿ ಕಾಣಬರುವ ಇತರ ಲಕ್ಷಣಗಳು. ಸೋಂಕು ಹತ್ತಿದಂದಿನಿಂದ 12-14 ದಿವಸಗಳ ಪರ್ಯಂತ ರೋಗಾಣುಗಳ ವೃದ್ಧಿ ಕಂಡುಬರುತ್ತದೆ. ಈ ಕಾಲದಲ್ಲಿ ವ್ಯಕ್ತಿ ಆರೋಗ್ಯವಾಗಿಯೇ ಇರಬಹುದು. ಅನಂತರ ಇದ್ದಕ್ಕಿಂತೆ ಚಳಿ, ನಡುಕ, ತಲೆನೋವು, ಮೈಕೈನೋವು, ಜ್ವರ ಇವು ಕಾಣಿಸಿಕೊಳ್ಳುತ್ತವೆ. 2-3 ದಿವಸಗಳಲ್ಲಿ ಜ್ವರ 390ಅ-400ಅ ಏರುತ್ತದೆ ಮತ್ತು ಮುಂದೆ ಹೆಚ್ಚುಕಡಿಮೆ ಅದೇ ಮಟ್ಟದಲ್ಲಿರುತ್ತದೆ. ಮುಖ ಕಣ್ಣುಗಳು ಕೆಂಪಡರಿರುವುದು, ನಾಲಿಗೆ ದೋಷ (ಫರ್ಡ್ ಟಂಗ್), ನಾಲಿಗೆ ಅದಿರುತ್ತಿರುವುದು, ಬಾಯಿ ಒಣಗಿ ತುಟಿಯ ಮೇಲೆ ಪೊರೆಗಟ್ಟಿರುವುದು (ಸಾರ್ಡಿಸ್), ಮೂಗು ಗಂಟಲು ಕೆಂಪೇರಿರುವುದು, ಮೂಗಿನಿಂದ ರಕ್ತ ಸುರಿಯುವುದು, ಉಸಿರಾಟದ ದರ ಹೆಚ್ಚಾಗಿರುವುದು-ಇವು ಸಾಮಾನ್ಯ, ರೋಗಿಯ ಹತ್ತಿರ ಇಲಿ ವಾಸನೆಯನ್ನು ಹೋಲುವ ದುರ್ಗಂಧವಿರಬಹುದು. 3-4 ದಿವಸಗಳಲ್ಲಿ ಮಲಬದ್ಧತೆ, ಹೊಟ್ಟೆಯಲ್ಲಿ ಸಂಕಟ, ಗುಲ್ಮವೃದ್ಧಿ, ಶ್ರವಣಮಾಂದ್ಯ-ಇವು ಉಂಟಾಗಿ ರೋಗಿ ಮಂಕಾಗುತ್ತಾನೆ. ಮನಸ್ಸು ಅಸ್ತವ್ಯಸ್ತಗೊಳ್ಳುತ್ರದೆ. ನಾಲ್ಕನೆಯ ಅಥವಾ ಐದನೆಯ ದಿವಸ ಈ ರೋಗದ ವಿಶಿಷ್ಟ ಲಕ್ಷಣವಾದದ್ದು ಕಾಣಿಸಿಕೊಳ್ಳುತ್ರದೆ : ಹೆಗಲು ಕೈಕಾಲುಗಳು, ಅಪರೂಪವಾಗಿ ಮುಖ ಹಾಗೂ ಅಂಗೈ ಮತ್ತು ಅಂಗಾಲುಗಳು ಮೇಲೆ. ದದ್ದುಗಳು ಮೊದಲ ದಿನ ಅಚ್ಚ ಕೆಂಪಾಗಿದ್ದು ಬೆರಳಿನಿಂದ ಅವುಕಿದರೆ ಮಾಯವಾಗದ ಚುಕ್ಕಿಗಳಂತಿರುತ್ತವೆ. ಸುಮಾರು 10 ದಿವಸಗಳಲ್ಲಿ ಕಂದು ಬಣ್ಣಕ್ಕೆ ತಿರುಗಿ ಚುಕ್ಕಿಗಳು ಕಣ್ಮರೆಯಾಗುತ್ತವೆ. ಇವಲ್ಲದೆ ಚರ್ಮದಲ್ಲಿ ಅಲ್ಲಲ್ಲಿ ಕಲೆಗಳು, ಅನೇಕವೇಳೆ ಚರ್ಮದ ಅಡಿಯಲ್ಲಿ ರಕ್ತಸಾವ್ರವಾದಂತೆ ಕೆಂಪು ಕಲೆಗಳು, ಕಾಣಿಸಿಕೊಳ್ಳಬಹುದು. ಇವು ದದ್ದಿನಂತೆಯೇ ಕ್ರಮವಾಗಿ ಹೆಗಲು, ಕಂಕುಳು, ಎದೆ, ಹೊಟ್ಟೆ, ಬೆನ್ನು- ಈ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತವೆ. ಬ್ರಾಂಕೈಟಿಸ್ ರೋಗಲಕ್ಷಣಗಳು, ಬ್ರಾಂಕೋ ನ್ಯುಮೋನಿಯ, ಪ್ಲೂರಿಸಿ, ರಕ್ತವಮನ, ರಕ್ತಮೂತ್ರ, ರಕ್ತಮಲ ಇವುಗಳೂ ಕಾಣಬರಬಹುದು. ಭಯಂಕರ ಕನಸುಗಳು, ಸ್ನಾಯುಗಳ ಕಂಪನ (ಟ್ರೆಮರ್ಸ್) ನಾಲಿಗೆಯ ಕಂಪನ, ಮಂಪರು ಮತ್ತು ಸನ್ನಿಪಾತ ಮುಂತಾದ ನರಮಂಡಲ ಅವ್ಯವಸ್ಥೆಯ ಲಕ್ಷಣಗಳು ಮೊದಲ ವಾರದಲ್ಲಿ ಪ್ರಮುಖವಾಗಿ ಇರುತ್ತವೆ. ತೀವ್ರವಾದ ರೋಗದಲ್ಲಿ ಜ್ಞಾನತಪ್ಪಿ ಹೋಗಬಹುದು (ಕೋಮ) ಇಲ್ಲವೆ ಚಿತ್ತಪ್ರಕೋಪ (ಮೇನಿಯ) ಉಂಟಾಗಬಹುದು. ಮಲಮೂತ್ರಗಳ ಹತೋಟಿ ತಪ್ಪಬಹುದು. ರೋಗ ವಾಸಿ ಆದರೆ 12-13ನೆಯ ದಿವಸದಿಂದ ಜ್ವರ ಕಡಿಮೆ ಆಗುತ್ತ 14-16ನೆಯ ದಿವಸ ದೇಹೋಷ್ಣತೆ ಆರೋಗ್ಯಮಟ್ಟ ಮುಟ್ಟುತ್ತದೆ. ಸಾವು ಸಂಭವಿಸಿದರೆ ಅದು ಎರಡನೆಯ ವಾರದಲ್ಲೆ. ನ್ಯೂಮೋನಿಯ ಉಂಟಾಗಿ ಇಲ್ಲವೇ ಮೂತ್ರ ಜನಕಾಂಗಗಳ ಕಾರ್ಯಕ್ಷೀಣತೆ ಉಂಟಾಗಿ ಸಾವು ಸಂಭವಿಸುತ್ತದೆ. ಗುಂಡಿಗೆಯ ಸ್ನಾಯುವಿನ ಊತ (ಮೈಯೋಕಾರ್ಡೈಟಿಸ್), ಚರ್ಮಕೊಳೆತ (ಗ್ಯಾನ್‍ಗ್ರೀನ್) ಇವು ಇತರ ತೊಡಕುಗಳು, ರೋಗಿ ಗುಣಹೊಂದಿದ ಬಳಿಕ ಅನೇಕ ತಿಂಗಳುಗಳು ಕಳೆದ ಮೇಲೆಯೂ ಚಿತ್ತಸ್ವಾಸ್ಥ್ಯ ದೊರಕದೆ ಇರಬಹುದು. ಈ ಮರುಕಳಿಸಿದ ರೋಗಕ್ಕೆ ಬ್ರಿಲ್ಲನ ರೋಗ ಎಂದು ಹೆಸರುಂಟು. ಇದರ ಲಕ್ಷಣಗಳೂ ಮೊದಲಿನ ಸಾಂಕ್ರಾಮಿಕ ಟೈ¥sóÀಸ್ಸಿನ ಲಕ್ಷಣಗಳಂತೆಯೇ ಇವೆ. ರೋಗಿಯ ಮತ್ತು ಆತನ ಹತ್ತಿರ ಇರುವುದರಲ್ಲಿ ಹೇನುಗಳು ಇಲ್ಲದಹಾಗೆ ಮಾಡುವುದರಿಂದ ರೋಗ ಹರಡುವುದನ್ನು ತಡೆಯಬಹುದು. ಇದಕ್ಕೆ 10% ಡಿ.ಡಿ.ಟಿ. ಪುಡಿಯನ್ನು ಬಟ್ಟೆ, ಹಾಸಿಗೆ, ತಲೆ ಕೂದಲುಗಳ ಮೇಲೆ ಸಿಂಪಡಿಸಬೇಕು. 8-10 ದಿವಸಗಳ ಬಳಿಕ ಎರಡನೆಯ ಸಾರಿ ಡಿ.ಡಿ.ಟಿ. ಯನ್ನು ಉಪಯೋಗಿಸಬೇಕು. ಒಂದು ಪ್ರದೇಶದಲ್ಲಿ ವಾಸಿಸುವ ಜನಗಳೆಲ್ಲ. ದೈಹಿಕ ನೈರ್ಮಲ್ಯ, ಡಿ.ಡಿ.ಟಿ. ಉಪಯೋಗ ಮುಂತಾದ ಹೇನು ನಿರ್ಮೂಲನ ಕ್ರಮಗಳನ್ನು ಕೈಗೊಂಡರೆ ರೋಗದ ಸಾಂಕ್ರಾಮಿಕತೆಯನ್ನು ತಡೆಗಟ್ಟಬಹುದು. ರೋಗಿಯ ಹತ್ತಿರ ಇರಬೇಕಾದವರು ಇದರ ಜೊತೆಗೆ ಡೈಮಿಥೈಲ್ ಥ್ಯಾಲೇಟ್ ಮುಂತಾದ ಕ್ರಿಮಿನಾಶಕಗಳನ್ನು ಬಳಸಬಹುದು. ಈ ರೋಗಕ್ಕೆ ಲಸಿಕೆ (ಕಾಕ್ಸ್ ವ್ಯಾಕ್ಸಿನ್) ತಯಾರಾಗಿರುವುದರಿಂದ ಅದನ್ನು ರೋಗ ನಿರೋಧಕ ಚುಚ್ಚುಮದ್ದನ್ನಾಗಿ ಉಪಯೋಗಿಸಬಹುದು. ಸಾರರಿಕ್ತಗೊಳಿಸಿ ಇಲ್ಲವೇ ಜೀವ ನಾಶಮಾಡಿದ ರೋಗಾಣುಗಳು ಚುಚ್ಚುಮದ್ದನ್ನು ಸೈನಿಕರು. ಪ್ರಯೋಗಾಲಯದಲ್ಲಿ ಕೆಲಸಮಾಡುವವರು ಮುಂತಾದ ಟೈ¥sóÀಸ್ ರೋಗದ ಸೋಂಕಿಗೆ ಸತತವಾಗಿ ಒಡ್ಡಲ್ಪಟ್ಟಿರುವವರಿಗೆ ರೋಗ ನಿರೋಧಕ್ಕಾಗಿ ಕೊಡುವುದುಂಟು. ಟೈ¥sóÀಸ್ ರೋಗಕ್ಕೆ ಕ್ಲೋರಮ್‍ಫೆóನಿಕಾಲ್, ಟೆಟ್ರಸೈಕ್ಲಿನ್, ಡೊಕ್ಸಿಸೈಕ್ಲಿನ್ ಮುಂತಾದ ಪ್ರತಿಜೈವಿಕಗಳು (ಆಂಟಿಬಯೋಟಿಕ್ಸ್) ಬಹು ಪರಿಣಾಮಕಾರಿಗಳಾದ ಔಷಧಗಳು. 500 ಮಿ.ಗ್ರಾಮಿನಷ್ಟು ಟೆಟ್ರಸೈಕ್ಲಿನ್, ಇಲ್ಲವೆ ಕ್ಯಾರಾಂಫಿನಿಕಾಲ್ ಔಷಧವನ್ನು ದಿನಕ್ಕೆ ನಾಲ್ಕು ಬಾರಿಯಂತೆ ಇಲ್ಲವೆ 200 ಮಿಗ್ರಾಂ ಡೊಕ್ಸಿಸೈಕ್ಲಿನ್ ಒಮ್ಮೆ ಕೊಟ್ಟು, ಅದು ಮರುಕಳಿಸದಂತೆ 2-3 ದಿನ ಮತ್ತೆ ಕೊಡಬಹುದು. 7 ದಿವಸ ಕೊಡಬೇಕು. ಸಾಮಾನ್ಯವಾಗಿ ಜ್ವರ 2-3  ದಿವಸಗಳಲ್ಲಿ ಕಡಿಮೆ ಆಗಿ ರೋಗ ಗುಣವಾಗುತ್ತದೆ. ರೋಗ ತೀವ್ರವಾಗಿದ್ದರೆ ಔಷಧವನ್ನು ಹೆಚ್ಚು ಪ್ರಮಾಣದಲ್ಲಿ ಕೊಡಬೇಕಾಗುತ್ತದೆ. ಅಲ್ಲದೆ ಚಿಕೆತ್ಸೆಗೆ ಕಾರ್ಟಿಕೋಸ್ಟೀರಾಯ್ಡುಗಳೂ ಅಗತ್ಯವಾಗಬಹುದು.

	ಚಿಗಟ ಹರಡುವ ಟೈಫóಸ್ (ಫ್ಲೀ ಬೋರ್ನ್ ಟೈ¥sóÀಸ್) : ಇದು ಸ್ಥಳೀಯವಾಗಿ ಒಂದು ಪ್ರಾಂತ್ಯದಲ್ಲಿ ನೆಲೆಗೊಂಡ ರೋಗ (ಎನ್‍ಡೆಮಿಕ್). ಮುರೈನ್ ಟೈ¥sóÀಸ್, ಅಂಗಡಿ ಟೈ¥sóÀಸ್, ಮೂಷಕ ಟೈ¥sóÀಸ್-ಇವು ಪರ್ಯಾಯನಾಮಗಳು. ಭಾರತದ ಸಿಮ್ಲ, ಕೊಲ್ಕತ್ತ, ಮುಂಬಯಿಗಳಲ್ಲೂ ಮೆಕ್ಸಿಕೋ, ಉತ್ತರ ಅಮೆರಿಕಗಳಲ್ಲೂ ಕಂಡುಬರುತ್ತದೆ. ಬೇಸಿಗೆ ಮತ್ತು ಶರತ್ಕಾಲದಲ್ಲಿ ಇದರ ಉಲ್ಪಣತೆ ಹೆಚ್ಚು. ರೋಗಾಣುವಿನ ಹೆಸರು ರಿ. ಮೂಸೆರಿ. ಕಾಡು ಇಲಿಗಳಲ್ಲಿ ನೈಸರ್ಗಿಕವಾಗಿ ಸೋಂಕು ಕಂಡುಬರುವುದು. ಇಲಿಯಿಂದ ಇಲಿಗೆ ಸೋಂಕು ಚಿಗಟಗಳಿಂದ (ಸೀóನಾಪ್ಪಿಲ್ಲ ಚಿಯೋಪಿಸ್) ಇಲ್ಲವೇ ಇಲಿಹೇನುಗಳಿಂದ (ಪಾಲಿಪ್ಲಾಕ್ಸ್ ಸ್ಟೈನ್ಯುಲೋಸ) ಹಬ್ಬುತ್ತದೆ. ಚಿಗಟ ಮತ್ತು ಹೇನಿನ ಕರುಳುಗಳು ಭಿತ್ತಿಯ ಒಳ ಪದರದ ಜೀವಕೋಶಗಳಲ್ಲಿ ರೋಗಾಣುಗಳು ವರ್ಧಿಸಿ ಅವುಗಳ ಮಲದಲ್ಲಿ ವಿಸರ್ಜಿಸಲ್ಪಡುತ್ತವೆ. ಇಲಿಯ ಮೇಲಿನ ಚಿಗಟ ಅಕಸ್ಮಾತ್ತಾಗಿ ಮಾನವನನ್ನು ಕಡಿದಾಗ ನವೆಯಾಗಿ ಕೆರೆದುಕೊಳ್ಳುವುದು ರೂಢಿ. ಹಾಗೆ ಮಾಡುವಾಗ ಚಿಗಟವನ್ನು ಆ ಸ್ಥಳದಲ್ಲೇ ಹಿಚಿಕಿ ನಾಶಮಾಡುವುದೂ ಉಂಟು. ಇಂಥ ಸಂದರ್ಭಗಳಲ್ಲಿ ಚಿಗಟದ ಮಲದಲ್ಲಿರುನ ರೋಗಾಣು ಕೆರೆತದ ಗಾಯದ ಮೂಲಕ ಮಾನವ ದೇಹವನ್ನು ಸೇರುತ್ತದೆ. ಚಿಗಟದ ಒಣಮಲ ಧೂಳಾಗಿ ಉಸಿರಾಟದಿಂದ ಮಾನವ ದೇಹವನ್ನು ಹೋಗುವುದರಿಂದಲೂ ಸೋಂಕು ತಗಲಬಹುದು. ರಿ. ಮೂಸೆರಿ ರೋಗ ಗ್ರಸ್ತ ಇಲಿಯ ಮೂತ್ರದಲ್ಲಿಯೂ ಇರಬಹುದು. ಇದರಿಂದಲೂ ಮಾನವರಿಗೆ ಸೋಂಕು ಹತ್ತಬಹುದು. ಸೋಂಕು ತಗಲಿದ 8ರಿಂದ 14 ದಿವಸಗಳ ಬಳಿಕ ತಲೆ ನೋವು, ಚಳಿ ನಡುಕ, ಜ್ವರ ಇವು ಕಾಣಿಸಿಕೊಳ್ಳುತ್ತವೆ. ಜ್ವರ ಏರುತ್ತ 3-4 ದಿವಸಗಳಲ್ಲಿ 380ಅ-400ಅ ಮಟ್ಟ ತಲುಪುತ್ತದೆ. ಅನಂತರ ಹೆಚ್ಚುಕಡಿಮೆ ಆಗಿರುತ್ತದೆ. 12ನೆಯ ದಿವಸ ಜ್ವರ ಕಡಿಮೆ ಆಗುತ್ತ 13-14 ದಿವಸಗಳಲ್ಲಿ ಆರೋಗ್ಯಮಟ್ಟವನ್ನು ಮುಟ್ಟುತ್ತದೆ. ಜ್ವರ ಶುರುವಾದ 5ನೆಯ ದಿವಸದಲ್ಲಿ ದದ್ದು ಹೊಟ್ಟೆ, ಹೆಗಲು, ಎದೆ, ಕೈ ಮತ್ತು ತೊಡೆಗಳ ಮೇಲೆ ಕ್ರಮವಾಗಿ ಕಾಣಿಸಿಕೊಳ್ಳುತ್ತದೆ. ಮೊದಲು ಚುಕ್ಕಿಯಂತಿದ್ದು ಅನಂತರ ಗಂಧೆಯಂತೆ ಪರಿವರ್ತಿತವಾಗುತ್ತದೆ. ಕೆಮ್ಮು, ಕೆಮ್ಮಿದಾಗ ರಕ್ತ ಕಫ, ತೀವ್ರ ತಲೆನೋವು ಸುಸ್ತು, ಮಂಪರ-ಇವು ಇತರ ಲಕ್ಷಣಗಳು, ಒಟ್ಟಿನಲ್ಲಿ ಹೇನು ಹರಡುವ ಟೈ¥sóÀಸ್ಸಿನಂತೆಯೇ ಇದ್ದರೂ ಅದಕ್ಕಿಂತ ಸೌಮ್ಯ. ಇಲಿ ಮತ್ತು ಚಿಗಟಗಳ ನಾಶದಿಂದ ರೋಗವನ್ನು ತಡೆಗಟ್ಟಬಹುದು.

	ನುಸಿ ಹರಡುವ ಟೈ¥sóÀಸ್ (ಮೈಟ್‍ಬೋರ್ನ್ ಟೈ¥sóÀಸ್) : ಜಪಾನ್ ನದಿ ಜ್ವರ, ಪೊದೆ ಟೈ¥sóÀಸ್, ಶುಶುಗಾಮೂಷಿ ಜ್ಷರ-ಇವು ಪರ್ಯಾಯನಾಮಗಳು. ರೋಗಕಾರಕ ಹೆಸರು ರಿ. ಓರಿಎಂಟಾಲಿಸ್ ಮತ್ತು ರಿ. ಸುಟ್ಸುಗಮೂಷಿ. ಬರ್ಮ, ಇಂಡೊನೇಷ್ಯ, ಬಾಂಗ್ಲಾ, ಅಸ್ಸಾಮ್ ಪ್ರದೇಶಗಳಲ್ಲಿಯೂ ಮತ್ತು ಆಸ್ಟ್ರೇಲಿಯದ ಕ್ವೀನ್ಸ್‍ಲೆಂಡ್ ಸಂಸ್ಥಾನದಲ್ಲೂ ಈ ರೋಗ ಕಂಡುಬರುತ್ತದೆ. ಪೊದೆ ಕಾಡುಗಳಿರುವ ಪ್ರದೇಶಗಲ್ಲಿ ಓಡಾಡುವ ಜನ, ಅಲ್ಲಿಯ ರೋಗಾಣುಯುಕ್ತ ಇಲಿ, ಮೊಲ ಅಳಿಲು ಮುಂತಾದ ದಂಶಕ ಪ್ರಾಣಿಗಳಿಂದ ಸೋಂಕನ್ನು ಪಡೆಯುತ್ತಾರೆ. ಟ್ರಾಂಬಿಕ್ಯುಲ ಎಂಬ ನುಸಿಯ ಪ್ರಭೇದಗಳು ಈ ರೋಗ ಪ್ರಸಾರಕ್ಕೆ ಕಾರಣ. ಬೆಳೆವಣಿಗೆಯ ಕಾಲದಲ್ಲಿ ನುಸಿ ರೋಗಿಷ್ಠಪ್ರಾಣಿಯ ರಕ್ತವನ್ನು ಹೀರುವುದರಿಂದ ಸ್ವತಃ ರೋಗಾಣುಯುಕ್ತವಾಗುತ್ತದೆ. ಹೆಣ್ಣುನುಸಿ ರೋಗಾಣುವನ್ನು ತನ್ನ ಸಂತತಿಗೂ ವರ್ಗಾಯಿಸಬಲ್ಲುದು. ರೋಗಾಣುಯುಕ್ತ ನುಸಿಮರಿಗಳು ಇತರ ಪ್ರಾಣಿಗಳು ಅಥವಾ ಮಾನವರನ್ನು ಕಚ್ಚಿದಾಗ ರೋಗಾಣುಗಳು ಹೊಸವ್ಯಕ್ತಿಯ ದೇಹದೊಳಗೆ ಪ್ರವೇಶಿಸಿ ಸೋಂಕನ್ನು ಉಂಟುಮಾಡುತ್ತವೆ. ರೋಗಕಾರಕ ರಿಕೆಟ್ಸಿಯ ಔಘಿಏ ಪ್ರೊಟಿಯಸ್ಸನ್ನು ಮಾತ್ರ ಅಂಟಣಿಸುವುದರಿಂದ ಅದನ್ನು ಪತ್ತೆ ಮಾಡುವುದು ಸುಲಭ. ಮಾನವರಿಗೆ ಸೋಂಕು ಹತ್ತಿದ 9 ದಿವಸಗಳ ಮೇಲೆ ರೋಗ ಹೊರಹೊಮ್ಮಿ ಕಾಣಿಸಿಕೊಳ್ಳುತ್ತದೆ. ಚಳಿ ನಡುಕ, ಜ್ವರ ತಲೆನೋವು, ನುಸಿ ಕಡಿದ ಸ್ಥಳದಲ್ಲಿ. ಕಂಕುಳು ಅಥವಾ ತೊಡೆಸಂದು ಈ ಜಾಗಗಳಲ್ಲಿ ಸುಮಾರು 3ಮಿಮೀ. ಅಗಲವಾಗಿ ಗುಂಡಗಿರುವ ಹಾಗೂ ಕೊಳೆಯುತ್ತಿರುವ ವ್ರಣ ಮತ್ತು ಅದರ ಹೆಕ್ಕಳಿಕೆ. ಸ್ಥಳೀಯ ದುಗ್ಧರಸಗ್ರಂಥಿಯಗಳು ದೊಡ್ಡದಾಗುವುದು-ಇವು ಪ್ರಧಾನಲಕ್ಷಣಗಳು. ಜ್ವರ ಏರಿ 2-3  ಅ ದಿವಸಗಳಲ್ಲಿ 400ಅ -410ಅ  ಮಟ್ಟ ಮುಟ್ಟುತ್ತದೆ. ಕಣ್ಣು ಕೆಂಪೇರುವಿಕೆ, ಕೆಮ್ಮು, ಗುಲ್ಮವೃದ್ಧಿ-ಇವು ಇತರ ಲಕ್ಷಣಗಳು. ಜ್ವರ ಪ್ರಾರಂಭವಾದ 6-7 ದಿವಸಗಳ ಮೇಲೆ ಚರ್ಮದಲ್ಲಿ ಗಂಧೆಗಳಂಥ ದದ್ದುಗಳು (ಪ್ಯಾಪ್ಯೂಲ್ಸ್) ಹೊಟ್ಟೆ ಮತ್ತು ಎದೆಯ ಪಕ್ಕಗಳು, ಕೈ ಕಾಲುಗಳು ಈ ಸ್ಥಳಗಳಲ್ಲಿ ಕಾಣಿಸಿಕೊಂಡು 14ನೆಯ  ದಿವಸದ ಹೊತ್ತಿಗೆ ಇಳಿಯುತ್ತವೆ. ಜ್ವರ ಎರಡನೆಯ ವಾರದಲ್ಲಿ ಕಡಿಮೆ ಆಗುತ್ತ ಬಂದು 2-3 ಗಳಲ್ಲಿ ದೇಹೋಷ್ಣತೆ ಸಹಜಮಟ್ಟ ಮುಟ್ಟುತ್ತದೆ. ಕೆಲವು ಸಂದರ್ಭಗಳಲ್ಲಿ ಜ್ವರ ತೀವ್ರವಾಗುತ್ತ ರಕ್ತ, ಮಲ, ಗುಂಡಿಗೆಯ ಅಥವಾ ಮೂತ್ರಪಿಂಡ ಕಾರ್ಯವಿಫಲತೆ ಮುಂತಾದ ತೊಡುಕುಗಳು ಉಂಟಾಗಿ ರೋಗಿ ಮರಣಹೊಂದುತ್ತಾನೆ. ಪೊದೆಗಳ ನಿರ್ಮೂಲನ, ಪೊದೆಕಾಡಿನಲ್ಲಿ ಸಂಚರಿಸುವಾಗ ನುಸಿ ನಿರೋಧಕವಾದ ಡೈಬ್ಯುಟೈಲ್ ಥ್ಯಾಲೇಟನ್ನು ಸಿಂಪಡಿಸಿರುವ ಬಟ್ಟೆಗಳ ಧಾರಣೆ-ಇವುಗಳಿಂದ ರೋಗ ಪ್ರಸಾರವನ್ನು ತಡೆಗಟ್ಟಬಹುದು. ಪೊದೆ ಪ್ರದೇಶಗಳಲ್ಲಿ ಆಲ್ಡ್ರಿನ್ ಸಿಂಪಡಿಕೆ ಮಾಡಿ ನುಸಿಯನ್ನು ನಾಶಪಡಿಸಬಹುದು. 

	ಉಣ್ಣಿ ಹರಡುವ ಟೈ¥sóÀಸ್ (ಟಿಕ್‍ಬೋರ್ನ ಟೈ¥sóÀಸ್) : ಇದನ್ನು ಸಾಮಾನ್ಯವಾಗಿ ರಾಕಿ ಪರ್ವತದ ಚುಕ್ಕಿ ಜ್ವರ ಎಂಬ ಹೆಸರಿನಿಂದ ವ್ಯವಹರಿಸುವುದು ರೂಢಿ, ರೋಗಕಾರಕಗಳ ಹೆಸರು ರಿ. ರಿಕೆಟ್ಸ್. ರಿ. ಕೊನೆರಿ ಮತ್ತು ರಿ. ಆಸ್ಟ್ರಿಯಾಲಿಸ್, ಉಣ್ಣಿಗಳ ವಿಶಿಷ್ಟಪ್ರಭೇದಗಳು ಇವುಗಳ ಪ್ರಸಾರಕ್ಕೆ ಕಾರಣವಾಗಿವೆ. ಪಶ್ಚಿಮ ಪ್ರದೇಶಗಳಲ್ಲಿ ಡರ್ಮಸೆಂಟರ್ ಅಂಡರ್‍ಸೋನಿ (ವುಡ್ ಟಿಕ್) ಮತ್ತು ಪೂರ್ವ ಪ್ರದೇಶಗಳಲ್ಲಿ ಡ. ವೇರಿಯ ಬಿಲಿಸ್ (ಡಾಗ್‍ಟಿಕ್) ಇವು ಮಾತ್ರ ಮಾನವನಿಗೆ ಸೋಂಕನ್ನು ತಗಲಿಸಬಲ್ಲವು. ವಿಷಾಣುಯುಕ್ತ ಹೆಣ್ಣು ಉಣ್ಣೆಯಿಂದ ವಿಷಾಣುಗಳು ಮುಂದಿನ ಸಂತತಿಗೂ ವರ್ಗಾವಣೆ ಆಗುತ್ತವೆ. ಕುರಿ, ಮೇಕೆ, ನಾಯಿ ಮುಂತಾದವು ಈ ವಿಷಾಣುಗಳು ಸೋಂಕಿನಿಂದ ನೈಸರ್ಗಿಕವಾಗಿ ನರಳುವ ಪ್ರಾಣಿಗಳು. ಉಣ್ಣಿ ರೋಗಗ್ರಸ್ತ ಪ್ರಾಣಿಗಳ ರಕ್ತಹೀರಿ ವಿಷಾಣುಯುಕ್ತವಾಗುತ್ತದೆ. ಅಲ್ಲದೆ ಬಹುವರ್ಷಗಳು ತನ್ನ ದೇಹದಲ್ಲಿ ವಿಷಾಣುಗಳನ್ನು ನೆಲೆಗೂಡಿಸಿಕೊಂಡಿರುತ್ತದೆ. ವಿಷಾಣುಯುಕ್ತ ಉಣ್ಣಿ ಮಾನವನನ್ನು ಕಚ್ಚುತ್ತ ಹಾಗೆ ಮೈಗೆ ಅಂಟಿಕೊಂಡಿರುವ ನವೆ ನಿವಾರಣೆಗಾಗಿ ಮಾನವ ಕೆರೆದುಕೊಳ್ಳುತ್ತ ತನ್ನ ದೇಹದೊಳಕ್ಕ ವಿಷಾಣು ಪ್ರವೇಶವನ್ನು ಸುಲಭಗೊಳಿಸುತ್ತಾನೆ. ಈ ರೋಗ ಉತ್ತರ ಅಮೆರಿಕದ ರಾಕಿಪ್ರದೇಶಗಳಲ್ಲಿ ಸಾಮಾನ್ಯವೆಂಬುದು ಅದರ ಹೆಸರಿನಿಂದ ವ್ಯಕ್ತವಾಗಿದೆ. ದಕ್ಷಿಣ ಅಮೆರಿಕ, ಆಫ್ರಿಕ, ಭಾರತ, ಉತ್ತರ ಆಸ್ಟ್ರೇಲಿಯಗಳಲ್ಲಿಯೂ ಈ ರೋಗ ಸಾಮಾನ್ಯವಾಗಿರುವುದು ತಿಳಿದಿದೆ. ಸೋಂಕು ಹತ್ತಿದ 3ರಿಂದ 7 ದಿವಸಗಳಾದ ಬಳಿಕ ಚಳಿ, ನಡುಕ ಜ್ವರಗಳಿಂದ ಏಕಾಏಕಿ ರೋಗ ಹೊಮ್ಮುತ್ತದೆ. ಮೂರನೆಯ ದಿವಸವೇ ಜ್ವರ ಸುಮಾರು 390ಅ ಯಷ್ಟೂ ಐದನೆಯ ದಿವಸ 410ಅ -450ಅ ಯಷ್ಟೂ ಮಟ್ಟಕ್ಕೆ ಏರುತ್ತದೆ. ತಲೆನೋವು ಮೈಕೈನೋವು ಇತ್ಯಾದಿ ಇತರ ಲಕ್ಷಣಗಳು ಹೇನು ಹರಡುವ ಸಾಂಕ್ರಮಿಕ ಟೈ¥sóÀಸ್ಸಿನಂತೆಯೇ ಇರುತ್ತವೆ. ಜ್ವರ ಪ್ರಾರಂಭವಾದ ನಾಲ್ಕು ದಿವಸಗಳ ತರುವಾಯ ಮೈಮೇಲೆ ದಡಾರದಂಥ ದದ್ದುಗಳು ಕಂಡುಬಂದು ತೀವ್ರವಾಗಿ ಇವು ಗಂಧೆಗಳಂತಾಗುವುದಲ್ಲದೆ ರಕ್ತ ಹಾಗೂ ಕೀವು ಕುರುಗಳಂತಾಗುವುದೂ ಉಂಟು. ಮಣಿಕಟ್ಟು ಮುಂಗೈಗಳಲ್ಲಿದದ್ದು ಮೊದಲು ಕಾಣಿಸಿಕೊಳ್ಳುತ್ತದೆ. ಹೊಟ್ಟೆಯ ಮೇಲೆ ಕಾಣಿಸಿಕೊಳ್ಳುವುದು ಕೊನೆಗೆ. ಚರ್ಮದಲ್ಲಿ ಅಲ್ಲಲ್ಲಿ ರಕ್ತಸ್ರಾವವಾಗಿ ನೀಲಿಗಟ್ಟಿರುವುದೂ ಉಂಟು. ಮೊಳಕೈ, ಕಾಲುಬೆರಳುಗಳು, ಕಿವಿ- ಈ ಪ್ರದೇಶಗಳಲ್ಲಿ ಚರ್ಮ ಕೊಳೆತು ಮೂರನೆಯ ವಾರದಲ್ಲಿ ಸುಲಿದು ದದ್ದುಗಳು ಮಾಯುವ ಹೊತ್ತಿಗೆ ಇವೂ ಮಾಯುತ್ತವೆ. ಈ ರೋಗದಲ್ಲಿ ಮಲಬದ್ಧತೆ ಸಾಮಾನ್ಯ. ಯಕೃತ್ತು ಹಾಗು ಗುಲ್ಮದ ಗಾತ್ರವೃದ್ಧಿ, ಮೂತ್ರದಲ್ಲಿ ಅಲ್‍ಬ್ಯುಮಿನ್ ಮತ್ತಿತರ ಘನವಸ್ತುಗಳಿದ್ದು ಬಗ್ಗಡವಾಗಿರುವುಕೆ, ಮುಖ. ಕೈಕಾಲುಗಳು ಬಾವು, ವಾಕರಿಕೆ ವಮನ (ಎರಡನೆಯ ವಾರದಲ್ಲಿ) ಉಸಿರಾಟದರ ಏರುವಿಕೆ. ವೃಷಣಕೋಶ ಹಾಗೂ ಶಿಶ್ನದ ಮುಂದೊಗಲು ಕೊಳೆತು ಹೋಗುವುದು ಇಂಥವು ಇತರ ಲಕ್ಷಣಗಳು. ರೋಗಿ ಚೇತರಿಸಿಕೊಳ್ಳುವ ಸಂದರ್ಭಗಳಲ್ಲಿ ಜ್ವರ ಎರಡನೆಯ ವಾರದಲ್ಲಿ ಇಳಿಯುತ್ತದೆ. ಹೇನುಕಡಿತದ ಟೈ¥sóÀಸ್ ಪ್ರಸಂಗಗಳಲ್ಲಿನಂತಯೇ ದೇಹದ ಅನೇಕ ಸ್ಥಳಗಳಲ್ಲಿ ರಕ್ತನಾಳಗಳು ರೋಗಗ್ರಸ್ತವಾಗಿರುತ್ತವೆ. ಆದರೆ ಅವುಗಳ ಸುತ್ತ ಗಂಟುಕಟ್ಟಿಕೊಳ್ಳುವುದು ವಿರಳ. ನಾಯಿಗಳಿಗೆ ಉಣ್ಣೆ ಹತ್ತದಂತೆ ಕ್ರಿಮಿನಾಶಕಗಳನ್ನು ಉಪಯೋಗಿಸುವುದೇ ಅಲ್ಲದೆ ಕಚ್ಚಿಕೊಂಡಿರುವ ಉಣ್ಣಿಗಳನ್ನು ಚಿಮಟದಿಂದ ತೆಗೆದು ಆ ಸ್ಥಳದಲ್ಲಿ ಚುಟಿಕೆ ಹಾಕುವುದರಿಂದ (ಕಾಟರೈಸೇಷನ್) ರೋಗಪ್ರಸಾರವನ್ನು ತಡೆಗಟ್ಟಬಹುದು. ಉಣ್ಣಿಗಳಿರುವ ಪೊದೆಗಳನ್ನು ನಾಶಪಡಿಸಬೇಕಾಗುವುದು ಅಗತ್ಯ. ಮಾನವರಲ್ಲಿ ರೋಗವಿರುದ್ಧರಕ್ಷಣೆಗೆ ಮೂಲಗಳಿಂದ ತಯಾರಿಸಿದ ಲಸಿಕೆಯನ್ನು ಬಳಸಬಹುದು. ಇದನ್ನು ವಾರಕ್ಕೊಂದು ಸಲದಂತೆ ಮೂರು ವಾರ ಚುಚ್ಚುಮದ್ದಾಗಿ ತೆಗೆದುಕೊಳ್ಳಬೇಕು. ಇದರಿಂದ ರಕ್ಷಣೆ ಒಂದು ವರ್ಷ ಮಾತ್ರ ಒದಗಬಹುದಾದ್ದರಿಂದ ವರ್ಷ ಈ ರೀತಿ ಚುಚ್ಚುಮದ್ದು ಮಾಡಿಸಿಕೊಳ್ಳಬೇಕು. ರೋಗ ಕಾಣಿಸಿಕೊಂಡ ತರುಣದಲ್ಲಿ ಕೂಡ ಈ ಲಸಿಕೆಯನ್ನು ಉಪಯೋಗಿಸಬಹುದು. ಹಾಗೆ ಮಾಡಿದಾಗ ರೋಗದ ತೀವ್ರತೆ ಕಡಿಮೆ ಆಗಿ ಮರಣಸಂಭಾವ್ಯತೆ ತಪ್ಪುತ್ತದೆ. ಈಚಿನ ಆವಿಷ್ಕಾರಗಳಾದ ಕ್ಲೋರಮ್ ಫಿನಿಕಾಲ್ ಮತ್ತು ಟೆಟ್ರಸೈಕ್ಲಿನ್‍ಗಳು ರೋಗಕ್ಕೆ ಬಹು ಪರಿಣಾಮಕಾರಿಯಾದ ಔಷಧಗಳಾಗಿವೆ.

	ಈ ರೋಗದ ಭಾರತದಲ್ಲಿನ ಪ್ರಭೇದವನ್ನು 1917ರಲ್ಲಿ ಮೆಗಾ ಎಂಬಾತ ವಿವರಿಸಿದ. ಇದು ಹಳೆ ಮೈಸೂರು ರಾಜ್ಯದಲ್ಲಿಯೂ ಉಂಟೆಂಬುದು 1942ರಲ್ಲಿ ಹೆಲಿಗ್ ಮತ್ತು ನಾಯ್ಡು ಎಂಬ ವೈದ್ಯರ ವ್ಯಾಸಂಗಗಳಿಂದ ವ್ಯಕ್ತಪಟ್ಟಿತು. ಇದರ ಮುಖ್ಯ ಲಕ್ಷಣಗಳು ಹೀಗಿವೆ : ಹಿಮಾಲಯಪ್ರದೇಶ, ಉತ್ತರಪ್ರದೇಶ ಹಾಗೂ ದಕ್ಷಿಣ ಪಂಜಾಬುಗಳಲ್ಲಿ ಇದು ಸಾಮಾನ್ಯ, ನೈಸರ್ಗಿಕವಾಗಿ ಮೊಲ ಮತ್ತು ಅಳಿಲುಗಳ ರೋಗವಾಗಿದ್ದು ರ್ಹೈಪಿ ಕಿಫಾಲಸ್ ಅಥವಾ ಹೈಯಲೊಮ್ಮ ಏಜಿಪ್ಟಿಕಮ್ ಎಂಬ ಉಣ್ಣಿಗಳ ಕಡಿತದಿಂದ ರೋಗ ಮಾನವರಲ್ಲೂ ಸಂಭವಿಸುತ್ತದೆ. ಉಣ್ಣಿ ಮಾನವ ದೇಹಕ್ಕೆ ಕಚ್ಚಿಕೊಂಡೇ ಇರಬಹುದು. ಉಣ್ಣಿ ಕಚ್ಚಿದ ನೆನಪಿರಬಹುದು. ಇಲ್ಲವೇ ಅದು ಕಚ್ಚಿದ ಸ್ಥಳದಲ್ಲಿ ಒಂದು ಸಣ್ಣ ವ್ರಣ ಕಂಡುಬರಬಹುದು. ಸ್ಥಳೀಯ ದುಗ್ಧರಸಗ್ರಂಥಿಗಳು ದಪ್ಪವಾಗುವುದು ಸಾಮಾನ್ಯ. ರೋಗ ಹೊಮ್ಮಿದ ಸುಮಾರು ನಾಲ್ಕು ದಿವಸಗಳಾದ ಬಳಿಕ ದದ್ದು ಕಾಣಿಸಿಕೊಳ್ಳುತ್ತದೆ. ರೋಗಿಯ ರಕ್ತದ್ರವ OX2 ಪ್ರೋಟಿಯಸ್ ಪ್ರಭೇದವನ್ನು ವಿಶೇಷವಾಗಿಯೂ XO19 ಹಾಗೂ ಔಘಿಏ ಪ್ರಭೇದಗಳೆರಡನ್ನೂ ಸುಮಾರಾಗಿಯೂ ಅಂಟಣಿ ಆಗುವಂತೆ ಮಾಡುತ್ತದೆ.								
       												  (ಜಿ.ಎ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ